Friday, April 24, 2015

ಆಸೆ...




ಕಾಲಕಾಲಕ್ಕೂ ಬದಲಾಗುತ್ತೆ ಆಸೆಗಳ ವ್ಯಾಖ್ಯಾನ
ಹೊಸತನ ಬೇಕೆಂಬುವುದೇ ಮನಸು ಮನಸುಗಳ ಹಂಬಲ!!
ಎಲ್ಲವೂ ಕೈಸಿಕ್ಕಾಗ, ಮತ್ತದೇ ಹಳೆಯದರ ಮೋಹ!!

ಇಲ್ಲಿ ನೆಲೆ ಇದ್ದರೆ, ಮತ್ತೆಲ್ಲೋ ನೆಲೆಸುವಾಸೆ
ಅಲ್ಲಿ ನೆಲೆಯೂರಿದ ಮೇಲೆ, ಇದ್ದ ಹಳೆಯ ಗೂಡೇ ಬೇಕೆಂಬ ಅಭಿಲಾಷೆ
 
ಪುಟ್ಟ ಪುಟ್ಟಿಯರಾಗಿದ್ದಾಗ ಬೆಳೆದು ದೊಡ್ಡವರಾಗೋ ಆಸೆ
ದೊಡ್ಡವರಾದ ಮೇಲೆ ದುಡ್ಡು ಮಾಡೋ ಇಚ್ಛೆ,
ಇರುವುದನ್ನು ಬಚ್ಚಿಟ್ಟು ಮತ್ತಷ್ಟು ದೊಚೋ ಅಪೇಕ್ಷೆ,
ಎಲ್ಲವೂ ಕೈಸಿಕ್ಕಾಗ, ಮತ್ತೆ ಬಾಲ್ಯದ ನಿರ್ಲಿಪ್ತ ಸುಖದ ಬಯಕೆ!!

ಕಾಲಕಾಲಕ್ಕೂ ಬದಲಾಗುತ್ತೆ ಆಸೆಗಳ ವ್ಯಾಖ್ಯಾನ
ಎಲ್ಲವೂ ಕೈಸಿಕ್ಕಾಗ, ಮತ್ತದೇ ಹಳೆಯದರ ಮೋಹ



Friday, April 17, 2015

ಪಯಣ!!



ಒಂದೊಂದು ಹಂತದಲ್ಲೂ ಒಂದೊಂದು ಕಲಿಕೆ
ಬದುಕ ಪಯಣದಲಿ, ಒಮ್ಮೆ ಸೋಲಾದರೆ, ಮತ್ತೊಮ್ಮೆ ಗಳಿಕೆ...

ಅದೊಂದು ಹಂತದಲಿ ಜೊತೆ ನಡೆದಾಗ ಇಬ್ಬರು
ಬದುಕು ಹಸನಾಗಿತ್ತು, ದಾರಿಯ ಇಬ್ಬದಿ ಬಣ್ಣ ಬಣ್ಣದ ಕನಸ ಓಕುಳಿ ಚೆಲ್ಲಿತ್ತು…
ಹೆಜ್ಜೆ ಹೆಜ್ಜೆಗೂ ನಗುವಿನ ನಿನಾದ, ನಿನ್ನ ಸನಿಹದ ಉನ್ಮಾದ
ಹಿಂತುರಿಗಿ ನೋಡಿದರೆ, ನೀನು ಬರಿಯ ನೆನಪಷ್ಟೇ!!

ಪ್ರಶ್ನೆ....



ಚಿತ್ರ ವಿಚಿತ್ರ ಜನಜಂಗುಳಿಯಲಿ, ನೊಂದ ನಿಸ್ಚೀತನ ದೇಹಿ
ಪ್ರೀತಿ, ವಿಶ್ವಾಸ, ಮಮತೆ!!! ಎಲ್ಲಾ ಕಳೆದುಕೊಂಡ ನಿರ್ದಯೆ..
ನೆನ್ನೆಗಳ ನೋವಲ್ಲಿ, ನಾಳೆಗಳ ಚಿಂತೆಯಲಿ,
ಈ ಕ್ಷಣದ ನಲಿವನ್ನು ಮರೆತು
ಚಿತೆಯಾಗುವವರೆಗೂ ನಡೆಯುವುದು ಸರಿಯೇ?