Friday, February 6, 2015

ನಿರೀಕ್ಷೆ!!!


ಕ್ಷಣ ಕ್ಷಣಕ್ಕೂ ಬದಲಾಗೋ ಮನಸ್ಸು
ಮರಳಿ ಮರಳಿ ನಿನ್ನೇ ಬಯಸುತ್ತಿದೆ...
ಬೇಕು ನನಗೀಗ ನೀನು, ಈ ಕ್ಷಣ ನೀ ನನಗೆ ಬೇಕು!!

ಸೋನೆ ಮಳೆಯಲ್ಲಿ ನೆಂದು, ಕೊರೆಯುವ ಚಳಿಯಲಿ,
ನಿನ್ನ ಸನಿಹದ ಬಿಸಿಗೆ, ನಾ ಪರಮ ಸುಖಿ!!
ಧುಮಿ ಧುಮಿ ಧುಮ್ಮುಕ್ಕುವ ಪ್ರೀತಿಯ ಜಲಪಾತದಲಿ,
ನೆಂದು ನೀರಾದರೆ, ನಾ ಪ್ರೇಮಸುಖಿ!!

ಬೇಕು ನನಗೀಗ ನೀನು, ಈಗಲೇ ಬೇಕು ನೀ ನನಗೆ!!
ಮರಳಿ ಮರಳಿ ನಿನ್ನೇ ಬಯಸುತ್ತಿದೆ ಮನ,
ಬೇಕೆನ್ನುತ್ತಿದೆ ನಿನ್ನೇ!!

ಸ್ನೇಹಿತರ ಸಹವಾಸ ಬೇಡ, ಹಾಳು ಹರಟೆ ಸೊಗಸಾದ ಹಾಡು ಬೇಡ,
ತಿರುಗಾಡುವ ಮನಸ್ಸಿಲ್ಲ; ಗಿಡ, ಮರ, ಗುಡ್ಡದ ಸೊಬಗೂ ಖುಷಿಕೊಡುತ್ತಿಲ್ಲಾ,
ತುಂಬು ಚಂದಿರ ಓಡೋಡಿ ಬಂದ, ಸೂರ್ಯನೆಲ್ಲೋ ಮರೆಯಾಗಿ ಹೋದ,
ಚೆಲ್ಲುಚೆಲ್ಲಾಡುವ ತಾರೆಗಳೂ, ಯಾರನ್ನ ಹೀಗೆ ನೆಚ್ಚಿಸುತ್ತಿರುವರೂ??   

ಬೇಕು ನನಗೀಗ ನೀನು, ಈಗಲೇ ಬೇಕು ನೀ ನನಗೆ!!
ಮರಳಿ ಮರಳಿ ನಿನ್ನೇ ಬಯಸುತ್ತಿದೆ ಮನ,
ಬೇಕೆನ್ನುತ್ತಿದೆ ನಿನ್ನೇ!!

ನೆನ್ನೆ ಮೊನ್ನೆಗಳೆಲ್ಲ ನೀನಿಲ್ಲದೆ ಕಳೆದೆ,
ಇಂದು ಈ ಕ್ಷಣ ಕೂಡ ನಿನ್ನೇ ಬಯಸಿದೆ!!
ನಾಳೆಗಳ ನಿರೀಕ್ಷೆಯಲಿ ಕನಸನ್ನು ಕಟ್ಟಿರುವೆ,
ನೀ ಬಾರದಿದ್ದಲ್ಲಿ ಗೆಳೆಯಾ, ನಿಂತಲ್ಲೇ ನೀರಾಗಿ ನಿನ್ನ ನಾ ಸೇರುವೆ!!

ಬೇಕು ನನಗೀಗ ನೀನು, ಈಗಲೇ ಬೇಕು ನೀ ನನಗೆ!!
ಮರಳಿ ಮರಳಿ ನಿನ್ನೇ ಬಯಸುತ್ತಿದೆ ಮನ,
ಬೇಕೆನ್ನುತ್ತಿದೆ ನಿನ್ನೇ!!




 

Wednesday, February 4, 2015

ನಿರಾಶೆ!!!!



ಕಂಡ ಕನಸೆಲ್ಲಾ ಮಣ್ಣಿಗೆ ಸೇರಿತು,
ಕಾಡಿದ ಕ್ಷಣಗಳು ಗಾಳಿಯಲ್ಲೇಲ್ಲೋ ತೇಲಿ ಹೋಯಿತು,
ಆಕಾಶದೆತ್ತರದ ಪ್ರೀತಿ, ಒಮ್ಮೆಲೇ ಬಿದ್ದು ಅರೆ ಜೀವವಾಯಿತು,
ಯಾರ ದೃಷ್ಟಿ ತಾಗಿತೋ, ಯಾರ ಶಾಪ ಸೋಕಿತೋ,
ಸಾಗರದ ನೀರಾಯಿತಲ್ಲ ನನ್ನ ಪ್ರೀತಿ!!!
ಇದ್ದರು ಇಲ್ಲದ ಹಾಗೆ, ಸಿಕ್ಕರೂ ಸಿಗದ ಹಾಗೆ......