Friday, January 9, 2015

ನನ್ನವನೆನಾ ನೀನು, ನಾನೇನಾ ನೀನು....


ನಿನ್ನಂತೆಯೇ ನಾನು ಅಲ್ಲ ನೀನೇ ಆಗಿರುವೆ ನಾನು....

ಮೌನ ಮಾತುಗಳ ಸಂಘರ್ಷದಲಿ, ಸಾವಿರಾರು ಪ್ರಶ್ನೆ..
ಸಂಭಂದಗಳ ಬಂಧನ ಬಿಡಿಸಿದರೆ ನಾಳೆಗಳ ಯಕ್ಷ ಪ್ರಶ್ನೆ..
ಬಂಧಿಯಾಗಬೇಕು ನಿನ್ನ ಮೌನದಲಿ, ಬಂಧನವಾಗಬೇಕು ನಿನ್ನ ಮಾತಿನಲಿ
ಒಲವ ಧಾರೆಯಿಂದ ಮನ ನೆಂದು, ಭಾವಗಳು ನಿನ್ನಲ್ಲಿ ಬೆರೆತು ಬೆಸೆದಿದೆ,

ನಿನ್ನಂತೆಯೇ ನಾನು... ಅಲ್ಲ ನೀನೀ ಆಗಿರುವೆ ನಾನು...

ಪ್ರೀತಿಯ ಬಂಧನ ಬಿಡಿಸಿದರೆ, ನನ್ನ ಜೀವಕ್ಕೆ ಸಿಗಲಿ ವಿರಾಮ.
ನನ್ನಲಿರೋ ಆತ್ಮಕ್ಕೂ ಸಿಗಲಿ ಪೂರ್ಣವಿರಾಮ.....

ಭಾವನೆಗಳ ಬಿಡಿಸಿ ಪದಗಳಲ್ಲಿ ಪೋಣಿಸೋ ಕಲೆಗಾರಿಕೆ ನಿನಗಿಲ್ಲ,
ನನ್ನಲ್ಲಿ ಚಿಗುರೋ ಭಾವಭಂಡಾರದ ಅರಿವೂ ನಿನಗಿಲ್ಲ..
ಕಳೆದು ಹೋಗಿರುವೆ ಪ್ರೀತಿ ಪ್ರಣಯದ ಮತ್ತಿನಲಿ,
ನಿನ್ನ ಕಂಗಳ ಆಳವ ಹೊಕ್ಕೋ ಕೆಲಸದಲಿ,
ಆ ಕಂಗಳ ಆಳ, ಅದರ ಸೆಳೆತ, ಅದಕ್ಕೂ ಆಳದಲ್ಲಿರೋ ನಿನ್ನ ಮನವ ಕುಕ್ಕುತ್ತಿರುವೆ...

ನನ್ನವನೆನಾ ನೀನು, ನಾನೇನಾ ನೀನು

ಪ್ರೀತಿಯ ಬಂಧನ ಬಿಡಿಸಿದರೆ, ನನ್ನ ಜೀವಕ್ಕೆ ಸಿಗಲಿ ವಿರಾಮ.
ನನ್ನಲಿರೋ ಆತ್ಮಕ್ಕೂ ಸಿಗಲಿ ಪೂರ್ಣವಿರಾಮ.....

ಕಾಡಿ ಕಾಡಿ ಕoಡುಕೊಂಡೆ ನನ್ನೇ ನಾ ನಿನ್ನ ಮನದ ಮಾಯಾ ದರ್ಪಣದಲ್ಲಿ,
ನಿನ್ನೊಳಗೆ ಹೊಕ್ಕಿ, ನಿನ್ನತನವೆಲ್ಲ ಕದ್ದು, ನೀ ನನ್ನವನು ಎಂದು ಬೀಗುತ್ತಿರುವೆ.
ನನ್ನೀ ಬಿಂಕ ಬಿಗುಮಾನಕ್ಕೆ ನಿನ್ನ ಪ್ರೀತಿಯ ಬುತ್ತಿ,
ಒಲುವನ್ನು ಹೀಗೆ ಉಣಿಸುತ್ತಿರು, ಪ್ರೀತಿಯ ಹೀಗೆ ಬೆಳೆಸುತ್ತಿರು.

ನನ್ನಂತೆಯೀ ನೀನು, ಅಲ್ಲ ನಾನೇ ನೀನು...

ಪ್ರೀತಿಯ ಬಂಧನ ಬಿಡಿಸಿದರೆ, ನನ್ನ ಜೀವಕ್ಕೆ ಸಿಗಲಿ ವಿರಾಮ.
ನನ್ನಲಿರೋ ಆತ್ಮಕ್ಕೂ ಸಿಗಲಿ ಪೂರ್ಣವಿರಾಮ.....

5 comments:

  1. Superb... :) All the best . .. :)

    ReplyDelete
  2. Good one:) come up with more kavanas.

    ReplyDelete
  3. Awesome, deeply touched meaninful words Shwetha.. great start and keep up the good work kavitri'ji :)

    ReplyDelete
  4. Shwetha awesome.... wish you all the best

    ReplyDelete
  5. Shwetha superb , n last lines are heart touching

    ReplyDelete